೯೯ ೨೦೧೯ರ ಕನ್ನಡ ಭಾಷೆಯ ಚಲನಚಿತ್ರ, ಪ್ರೀತಂ ಗುಬ್ಬಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ ಮತ್ತು ರಾಮುರವರು ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಗಣೇಶ್ ಮತ್ತು ಭಾವನ ಮುಖ್ಯ ಪಾತ್ರದಲ್ಲಿದ್ದಾರೆ. ಈ ಚಿತ್ರವು ೧ ಮೇ ೨೦೧೯ ರಂದು ಬಿಡುಗಡೆಯಾಯಿತು. ಇದು ೨೦೧೮ ರ ತಮಿಳು ಚಿತ್ರ ೯೬ ನ ರಿಮೇಕ್ ಆಗಿದೆ. == ಪಾತ್ರವರ್ಗ == ರಾಮ್ ಆಗಿ ಗಣೇಶ್ ಹೇಮಂತ್ - ಕಿರಿಯ ರಾಮ್ ಆಗಿ ಜಾನು ಪಾತ್ರದಲ್ಲಿ ಭಾವನಾ ಸಮಿಕ್ಷಾ- ಕಿರಿಯ ಜಾನು ಆಗಿ ರವಿಶಂಕರ್ ಗೌಡ ಜ್ಯೋತಿ ರೈ ಪಿ ಡಿ ಸತೀಶ್ ಚಂದ್ರ - ಗಿರಿ ಅಮೃತ ರಾಮಮೂರ್ತಿ ಪ್ರಣಯ ಮೂರ್ತಿ ಶಮಂತ್ ಶೆಟ್ಟಿ ಪ್ರಕಾಶ್ ತುಮಿನಾಡ್ ಚಂದ್ರಹಾಸ್ ಉಲ್ಲಾಳ್ == ನಿರ್ಮಾಣ == ೯೯, ತಮಿಳು ಚಿತ್ರ ೯೬ (೨೦೧೮) ನ ರೀಮೇಕ್ ಅನ್ನು ಪ್ರೀತಮ್ ಗುಬ್ಬಿ ನಿರ್ದೇಶಿಸಿದ್ದಾರೆ, ಇದು ಅವರು ನಿರ್ದೇಶಿಸಿದ ಮೊದಲ ರೀಮೇಕ್ ಚಿತ್ರವಾಗಿದೆ.ಇದನ್ನು ರಾಮುರವರು ರಾಮು ಫಿಲ್ಮ್ಸ್ ಅಡಿಯಲ್ಲಿ ನಿರ್ಮಿಸಿದ್ದಾರೆ ಮತ್ತು ಸಂತೋಷ್ ರೈ ಪತಂಜೆ ಅವರ ಛಾಯಾಗ್ರಹಣವಿದೆ. ೧೯೯೯ರಲ್ಲಿ ಕಾಲೇಜಿನಲ್ಲಿದ್ದಾಗ ಗಣೇಶ್ ರವರೊಂದಿಗೆ ಪ್ರೀತಂಗುಬ್ಬಿ ರವರ ಸ್ನೇಹ ಪ್ರಾರಂಭವಾದ ಕಾರಣ ಚಿತ್ರಕ್ಕೆ ೯೯ ಎಂದು ಹೆಸರಿಡಲಾಯಿತು. ಗುಬ್ಬಿ ಮತ್ತು ಗಣೇಶ್ ರವರು ಜೋಡಿಯಾದರೆ ಯಶಸ್ಸು ಖಚಿತ ಎಂದು ಭಾವಿಸಿ ಭಾವನಾರವರು ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡರು. ಚಿತ್ರದ ಮೊದಲ ಹಂತದ ಚಿತ್ರೀಕರಣ ಪುತ್ತೂರಿನಲ್ಲಿ ನಡೆಯಿತು. == ಧ್ವನಿಪಥ == ಧ್ವನಿಪಥವನ್ನು ಅರ್ಜುನ್ ಜನ್ಯ ಸಂಯೋಜಿಸಿದ್ದಾರೆ . ಇದು ಅವರ ೧೦೦ ನೇ ಧ್ವನಿಪಥವಾಗಲಿದೆ. ಆಡಿಯೊ ಹಕ್ಕುಗಳನ್ನು ಆನಂದ್ ಆಡಿಯೊಗೆ ₹ ೫ ಮಿಲಿಯನ್ ಗೆ ಮಾರಾಟ ಮಾಡಲಾಯಿತು. "ಹೀಗೆ ದೂರ" ಹಾಡನ್ನು ೪ ಮಾರ್ಚ್ ೨೦೧೯ ರಂದು ಬಿಡುಗಡೆ ಮಾಡಲಾಯಿತು. == ಬಿಡುಗಡೆ == ಈ ಚಿತ್ರವು ೧ ಮೇ ೨೦೧೯ ರಂದು ಬಿಡುಗಡೆಯಾಯಿತು. == ಇದನ್ನೂ ನೋಡಿ == ಚಾರ್ ಮಿನಾರ್ (ಚಲನಚಿತ್ರ) == ಉಲ್ಲೇಖಗಳು ==